ObjectiveGanesh Kamath

Present Presidentಗೇರು ಬೆಳೆದು ಬದುಕು ಕಟ್ಟಿಕೊಳ್ಳೋಣ

ಗೇರುಬೀಜ ಪ್ರೋಟೀನ್, ಕೊಬ್ಬು, ಕಾರ್ಬೋಹೈಡ್ರೇಟ್ ಖನಿಜ ಮತ್ತು ವಿಟಮಿನ್‍ಯುಕ್ತವಾಗಿದ್ದು, ಅತ್ಯಂತ ಉತ್ತಮ ಆಹಾರ ಗುಂಪುಗಳಿಗೆ ಸೇರಿದೆ. ಇದನ್ನು ಮನಗಂಡು ಪ್ರಪಂಚದಾದ್ಯಂತ ಗೇರುಬೀಜಕ್ಕೆ ಪ್ರತಿವರ್ಷ ಬೇಡಿಕೆ ಹೆಚ್ಚುತ್ತಿದೆ. ಕರಾವಳಿ ಪ್ರದೇಶದಲ್ಲಿ ಗೇರುಬೆಳೆ ವಿಶೇಷವೇನು ಅಲ್ಲ ಆದರೆ ಇತ್ತೀಚಿನ ಬೆಳವಣೆಗೆಯಿಂದ ಗೇರುಬೀಜದ ಬೆಲೆ ಕಳೆದ ವರ್ಷಕ್ಕಿಂತ ದ್ವಿಗುಣವಾಗಿದ್ದು ಗೇರು ಬೆಳೆಗಾರರಿಗೆ ಸಂತೋಷದ ವಿಷಯವಾಗಿದೆ. ಭಾರತದಲ್ಲಿ ನೂರಾರು ಗೇರುಬೀಜ ಕಾರ್ಖಾನೆಗಳು ಇದ್ದರೂ ಭಾರತದಲ್ಲಿ 50 ಪ್ರತಿಶತಕ್ಕಿಂತ ಹೆಚ್ಚು ಹೆಚ್ಚು ಗೇರುಬೀಜ ವಿದೇಶದಿಂದ ಆಮದಾಗುತ್ತಿದೆ. ಅಲ್ಲಿಂದ ಅಗ್ಗದ ಬೆಲೆಯಲ್ಲಿ ಗೇರು ಸಿಕ್ಕುವುದರಿಂದ ಇಲ್ಲಿಯವರೆಗೆ ಭಾರತದಲ್ಲಿ ಗೇರುಬೀಜಕ್ಕೆ ಅಷ್ಟೊಂದು ಬೆಲೆ ಇರಲಿಲ್ಲ. ಗೇರು ವಾಣಿಜ್ಯ ಬೆಳೆ ಗುಂಪಿಗೆ ಸೇರಿಸಿದ್ದರು. ನಿಜವಾಗಿಯೂ ಬೆಳೆಗಾರರಿಗೆ ಹೇಳುವಷ್ಟು ಪ್ರಮಾಣದಲ್ಲಿ ಲಾಭ ತಂದು ಕೊಡುತ್ತಿರಲಿಲ್ಲ. ಗೇರುಬೀಜ ಸಂಸ್ಕರಣೆ ತಂತ್ರಜ್ಞಾನ ಕರಗತ

ಗೇರುಬೀಜ ಸಂಸ್ಕರಣೆಯನ್ನು ಬೆಳೆಸಿದವರು ಭಾರತೀಯರೇ ಆಗಿದ್ದು, ಒಂದು ಕಾಲದಲ್ಲಿ ಭಾರತ ರಫ್ತಿನಲ್ಲಿ ಮೊದಲ ಸ್ಥಾನದಲ್ಲಿತ್ತು. ಗೇರುಬೀಜ ಸಂಸ್ಕರಣೆಯ ತಂತ್ರಜ್ಞಾನ ಈಗ ಎಲ್ಲರಿಗೂ ತಿಳಿದಿರುವ ರಹಸ್ಯ. ಎಲ್ಲಿ ಗೇರುಬೀಜ ಬೆಳೆಸುತ್ತಿದ್ದರು ಆ ದೇಶಗಳಲ್ಲಿ ತಾವೇ ಸಂಸ್ಕರಣೆ ಮಾಡಲು ಪ್ರಾರಂಭಿಸಿದ್ದಾರೆ. ಗೇರುಬೀಜ ಆಮದಿನ ಮೇಲೆ ಭಾರತ ಸರಕಾರ ಕಸ್ಟಮ್ಸ್ ಹಾಕುತ್ತದೆ. ಇದರಿಂದ ಕಚ್ಛಾ ಗೇರು ಬೆಲೆ ಮುಗಿಲು ಮುಟ್ಟಿದೆ ಮತ್ತು ಅದೇ ಕಾರಣ ಭಾರತದಲ್ಲಿ ಬೆಳೆದ ಕಚ್ಛಾ ಗೇರಿಗೆ ಈಗ ಎಲ್ಲಿಲ್ಲದ ಬೆಲೆ ಬಂದಿದೆ. ಅದರಲ್ಲೂ ಕರಾವಳಿಯಲ್ಲಿ ಬೆಳೆಸುವಲ್ಲಿ ಯಾರು ಅಂತಹ ವೈಜ್ಞಾನಿಕ ಪ್ರಯತ್ನ ಮಾಡುತ್ತಿರಲಿಲ್ಲ. ಗೇರು ಮರ ಜೋಪಾನ ಬಲು ಸುಲಭ

ಗೇರು ಮರದ ವಿಶೇಷವೇನೆಂದರೆ ಅದನ್ನು ಜೋಪಾನ ಮಾಡುವುದು ತುಂಬಾ ಸುಲಭ. ಅಡಿಕೆ, ತೆಂಗು ಹೆಚ್ಚು ಬೆಲೆಯನ್ನು ಉತ್ಪತ್ತಿ ಮಾಡುವುದಾದರೂ ಅವುಗಳ ಸಂಸ್ಕರಣೆಗೆ ವಿಶೇಷವಾದ ಪರಿಶ್ರಮವನ್ನು ವಹಿಸಬೇಕು. ಏಕೆಂದರೆ ಈ ಬೆಳೆಗಳಿಗೆ ರೋಗಗಳು ಬಹಳ ಬೇಗ ಅಂಟಿಕೊಳ್ಳುತ್ತವೆ. ಗೇರು ಮರಕ್ಕೆ ರೋಗಬಾಧೆಯಿದೆ ಆದರೆ ಅದನ್ನು ಶಮನ ಮಾಡುವುದಕ್ಕೆ ಅಷ್ಟೇ ಸುಲಭ. ಇತ್ತೀಚಿನ ದಿನಗಳಲ್ಲಿ ದಿನಕೂಲಿ ಹೆಚ್ಚುತ್ತಿರುವುದರಿಂದ ಬೆಳೆಗಾರರಿಗೆ ಅಡಿಕೆ, ತೆಂಗು ಅಂತಹ ಬೆಳೆಗಳನ್ನು ಬೆಳೆಸಿ ಜೋಪಾನ ಮಾಡುವುದು ತುಂಬಾ ಕಷ್ಟ. ನೀರಿನ ಸಮಸ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಾ ಬಂದಿದೆ. ಇದನ್ನೆಲ್ಲ ಗಮನಿಸಿದರೆ ಗೇರು ಬೆಲೆ ಬಹಳ ಸುಲಭವಾಗಿ ಬೆಳೆಸಬಹುದು ಹಾಗೂ ಬಹಳ ಸುಲಭವಾಗಿ ಸಂಸ್ಕರಣೆ ಮಾಡಬಹುದು.

ವಿಜ್ಞಾನಿಗಳು ಬಹಳಷ್ಟು ಶ್ರಮವಹಿಸಿ ಗೇರುವಿನ ಹೊಸ ತಳಿಗಳನ್ನು ಬಿಡುಗಡೆ ಮಾಡಿದ್ದಾರೆ. ಈ ತಳಿಗಳು ಭಾಸ್ಕರ ಮುರು ಬೆಳೆ ತಳಿಗಳಿಗೆ ಹೋಲಿಸಿದರೆ ಬಹಳ ಹೆಚ್ಚಿನ ಪ್ರಮಾಣದಲ್ಲಿ ಉತ್ಪತ್ತಿಯಾಗುತ್ತಿದೆ. ಇಲ್ಲಿಯವರೆಗೆ ಗೇರು ಮರಗಳಿಗೆ ಗೊಬ್ಬರ ಹಾಕುವುದನ್ನು ಕೆಲವೇ ಕೆಲವರು ಮಾಡುತ್ತಿದ್ದು ಆದರೆ ಸಂಶೋಧನೆಯಿಂದ ತಿಳಿದು ಬಂದಿರುವುದೇನೆಂದರೆ ಕೇವಲ 50 ರೂ. ಗೊಬ್ಬರವನ್ನು ಆಗಸ್ಟ್, ಸೆಪ್ಟೆಂಬರ್ ತಿಂಗಳಲ್ಲಿ ಗೇರುಮರಕ್ಕೆ ಹಾಕಿದರೆ ಇಳುವರಿ ಪ್ರತೀ ಮರಕ್ಕೆ 4 ಕೆಜಿಯಿಂದ 8 ಕೆಜಿ ಹೆಚ್ಚುವುದು. ಕ್ರಮದಂತೆ ಬೆಳೆಸಿ ಲಾಭ ಗಳಿಸೋಣ

ಮೊದಲು 23 ಅಡಿಗಳಿಗೊಂದು ಗಿಡ ನೆಡುವ ಸಂಪ್ರದಾಯವಿದ್ದು ಈಗ ಮರಗಳನ್ನು ಸಂಶೋಧಕರು 8 ಅಡಿಗಳಿಗೊಂದು ಮರಗಳನ್ನು ಬೆಳೆಸಿ ಅವುಗಳನ್ನು ನಿರ್ಧರಿತ ಸಮಯದಲ್ಲಿ ಟ್ರಿಮ್ ಮಾಡುವುದರಿಂದ ಮರಗಳಿಗೆ ಆಕೃತಿಕೊಟ್ಟು ಹೆಚ್ಚಿನ ಬೆಳೆ ಬೆಳೆಯಬಹುದೆಂದು ತೋರಿಸಿಕೊಟ್ಟಿದ್ದಾರೆ. ಗೇರು ಮರಕ್ಕೆ ಸರಿಯಾದ ಸಮಯ ಎಂದರೆ ಹೂವು ಬಿಡುವುದಕ್ಕಿಂತ ಒಂದು ತಿಂಗಳ ಹಿಂದಿನಿಂದ ಹೂ ಬಿಡಲು ಪ್ರಾರಂಭವಾಗುವ ಆಗಲೂ ಚೆನ್ನಾಗಿ ನೀರು ಒದಗಿಸಿಕೊಟ್ಟಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಬೆಳೆಗಳನ್ನು ಬೆಳೆಯಬಹುದು. ಮರದ ಬುಡದಿಂದ ಸುಮಾರು 4 ಅಡಿ ದೂರದಲ್ಲಿ ನೀರನ್ನು ತುಂಬಿ ಉತ್ತಮವಾದ ಬೆಳೆ ಪಡೆಯಬಹುದಾಗಿದೆ.

ಗೇರು ಮರಕ್ಕೆ ಸಾಮಾನ್ಯವಾಗಿ ಟೀ ಮಾಸ್ಕೆ ಟ್ಯೂಸ್‍ಗಳನ್ನು ಹಾಗೂ ಇತರ ಕೀಟಗಳನ್ನು ಕೀಟನಾಶಕ ಸಿಂಪಡನೆಯಿಂದ ಬಹಳ ಸುಲಭವಾಗಿ ಶಮನ ಮಾಡಬಹುದು. ಈ ವಿಷಯವನ್ನು ಜನಸಮಾನ್ಯರಿಗೆ ಹಂಚಬೇಕೆಂದು ಮನದಟ್ಟು ಮಾಡಿಕೊಂಡು ಕೆಸಿಎಮ್‍ಎ ಅಂದರೆ ಕರ್ನಾಟಕ ಕ್ಯಾಶ್ಯೂ ಮ್ಯಾನುಫ್ಯಾಕ್ಚರ್ ಅಸೋಸಿಯೇಶನ್ ಈ ವಿಷಯದ ಬಗ್ಗೆ ಮಾಹಿತಿಗಳನ್ನು ಕಲೆಹಾಕಿ ಅದನ್ನು ಡಿಡಿಡಿ.ಜ್ಟಟಡ್ಚಿZoeಛಿಡಿ.್ಚಟಞ ಎನ್ನುವ ಅಂತರ್ಜಾಲದ ತಾಣದಲ್ಲಿ ಜನಸಾಮಾನ್ಯರಿಗೆ ತಲುಪುವಂತೆ ಮಾಡಿದೆ. ಆಸಕ್ತಿಯುಳ್ಳವರು ಹೆಚ್ಚಿನ ಮಾಹಿತಿಯನ್ನು ಡಿಡಿಡಿ.ಜ್ಟಟಡ್ಚಿZoeಛಿಡಿ.ಜ್ಞಿ ನಲ್ಲಿ ಓದಿ ತಿಳಿದುಕೊಳ್ಳಬಹುದು ಹಾಗೂ ವೀಡಿಯೋ ರೂಪದಲ್ಲಿ ನೋಡಬಹುದು.

ಭಾರತ ಸರಕಾರದ `ಮೇಕ್ ಇನ್ ಇಂಡಿಯಾ'ವನ್ನು ಯಶಸ್ವಿಗೊಳಿಸಲು ಬಹಳಷ್ಟು ಪ್ರಯತ್ನ ಪಡುತ್ತಿದೆ. ಕೇವಲ ಭಾರತದಲ್ಲಿ ಸಂಸ್ಕರಿಸಿದರಷ್ಟೇ ಸಾಲದು ಅತೀ ಹೆಚ್ಚು ಪ್ರದೇಶದಲ್ಲಿ ಬೆಳೆ ಬೆಳೆದು ನಮ್ಮ ದೇಶದ ಸ್ವಾದವನ್ನು ಪ್ರಪಂಚದಾದ್ಯಂತ ಸ್ವಾದಿಸುವಂತೆ ಮಾಡುವಲ್ಲಿ ನಾವೆಲ್ಲರೂ ಭಾಗಿಗಳಾಗಬೇಕು. ಗೇರು ಬೆಳೆಗಳನ್ನು ಬೆಳೆಯುವುದಕ್ಕೆ ಎಲ್ಲರಿಗೂ ತಿಳಿಸಿಕೊಡೋಣ ಹಾಗೂ ಇದನ್ನು ಬೆಳೆಯುವ ಮಾಹಿತಿಯನ್ನು ತಿಳಿದು ಸಾಧ್ಯವಾದಲ್ಲಿ ವೈಜ್ಞಾನಿಕವಾಗಿ ಗೇರು ಬೆಳೆ ಬೆಳೆಯೋಣ.

Cashew is rich in protein, fat, carbohydrates, minerals and vitamin and they belong to the best class of food. Every year demand for cashew nut is increasing. Cashew growing is not new in the coastal region, of India. But in recent months, cashew nut price has doubled in comparison to previous year price. This is very good news for cashew growers.

India has 100's of cashew nut factories. Considering Indian Cashew industry processing capabilities India is importing more than 50% for raw cashew nut for processing. Until the recent past as there was sufficient import Indian growers were not getting respectable income by selling raw cashew, although it is considered as a commercial crop. Cashew processing is invented by Indians at one point of time India was the highest exporter of cashew nut.

Today, every country knows cashew processing technique. Those countries who use to just export the cashew nuts have started processing cashew in their country only. Considering the taxes on Import, raw cashew nut prices have reached a new peak.

One of the reasons why returns for growing in India is low is identified as a casual approach towards growing cashews. No Scientific methods have been practicing to get the best results.

Cashew trees can be easily maintained. Arecanut and Coconut tree produce more yield in terms of revenue, but they are highly prone to diseases and involve  lots of labour. A lot of effort goes into protecting those plantations.  Whereas maintaining Cashew plantation is very easy as these pests which harm cashew trees can be easily controlled by pesticides.

In recent days, daily labour rates has considerably increased and in addition sometimes they are not available. Also, monkeys can easily destroy Arecnut and Coconut. Considering all the points cashew can be grown very easily & with minimal maintenance.

Scientists have worked hard and come out with new varieties of Cashew Saplings. For example Bhaskara-3, can give much better yield compared to other varieties. Till now putting fertilizer to cashew tree was practiced only by professional agriculturists. However, from the research it is established that only by fertilizing with around 2 KG of fertilizer during August & September, the yield from each tree will increase from 4 to 8 kg.

Earlier trees were planted at 23 Feet Spacing. Now researchers are growing cashew trees at 8 feet distance and by trimming the tree in a systematic manner, they are getting better results. It is also established by researches that if  the tree is irrigated 1 month prior to blossoming time, maximum yield can be expected.

If water pits (evaporation chambers) are created at a distance of 4 feet from a tree and fill it with water during above said period.

It is common for cashew tree getting infected by tea mosquitoes and other pests; using insecticide/pesticide spray one can avoid any further damage. 

With the intention of spreading this valuable information to all stakeholders, KCMA(Karnataka Cashew Manufacturers Association)  has collected information related to cashew growing from various sources and published information in website "growcashew.in" to reach people.

Interested people can visit site "www.growcashew.in" for more information on cashew/cashew growing where they can read and learn & also watch the video.

 Government of India is working hard to bring Success to "make in India" initiative

Just cashew processing in India is not enough, In India lot of cashew trees to be grown and processed. A message that is clear – “Grow in India,  Spread Indian Cashew Taste in the world”

Let us share information on growing cashew to all & adopt scientific methods in growing cashew